Monday, October 4, 2010

jokes

ಕ್ಲಬ್‌ನ ಲಾಕರ್‌ ರೂಂನಲ್ಲಿ ಹಲವಾರು ಮಂದಿ ಕೂತಿದ್ದರು. ಇದ್ದಕ್ಕಿದ್ದಂತೆ ಸೆಲ್‌ಫೋನೊಂದು ಸದ್ದು ಮಾಡತೊಡಗಿತು. ಕುಳಿತಿದ್ದವರಲ್ಲೊಬ್ಬ ಫೋನೆತ್ತಿಕೊಂಡ :

‘ಹಲೋ?’
‘ಹಲೋ, ಹನಿ. ನಾನು, ಗೊತ್ತಾಯಿತಾ. ನೀನು ಕ್ಲಬ್ಬಲ್ಲಿದ್ದಿಯೇನು?’
‘ಹ್ಞಾಂ’
‘ಒಳ್ಳೆಯದಾಯಿತು. ನಾನು ಕ್ಲಬ್‌ಗೆ ಹತ್ತಿರದಲ್ಲೇ ಇದ್ದೇನೆ. ಇಲ್ಲೊಂದು ಪಿಂಕ್  ಕೋಟು ನೋಡಿದೆ. ತುಂಬಾ ಚೆನ್ನಾಗಿದೆ. 1.5 ಸಾವಿರ ಡಾಲರು ಮಾತ್ರ. ತಗೊಳ್ಳಲಾ?’
‘ಅನುಮಾನ ಯಾಕೆ ? ನಿನಗೆ ಇಷ್ಟವಾದರೆ ತಗೋ.’
‘ಥ್ಯಾಂಕ್ಸ್‌ ಸ್ವೀಟಿ. ಆಮೇಲೆ, ನಾನೊಂದು ಮರ್ಸಿಡಿಸ್‌ ಕಾರಿನ ಮಳಿಗೆಗೆ ಹೋಗಿದ್ದೆ. ಹೊಸ ಡಿಸೈನಿನ ಕಾರುಗಳು ಬಂದಿವೆ. ಬೆಲೆಯೂ ಪರವಾಗಿಲ್ಲ ಅನ್ನಿಸಿತು. ಕಳೆದ ವರ್ಷ ತಗೊಂಡಿದ್ದೆವಲ್ಲ, ಆ ಕಾರನ್ನು ಎಕ್ಸ್‌ಚೇಂಜ್‌ ಮಾಡಿಕೊಡುವುದಾಗಿ ಹೇಳಿದ್ದಾರೆ...’
‘ಮರ್ಸಿಡಿಸ್‌ ಬೆಲೆ ಎಷ್ಟು ?’
‘ಕೇವಲ 60 ಸಾವಿರ ಡಾಲರು ’
‘ಆಯ್ತು. ಆದರೆ ಕೊಳ್ಳುವ ಮುನ್ನ ಇನ್ನೊಂದು ಸಾರಿ ಯೋಚಿಸು.’
‘ಗ್ರೇಟ್‌. ಇನ್ನೊಂದು ವಿಷಯವಿದೆ. ಕಳೆದ ವರ್ಷ ನಾವೊಂದು ಬಂಗ್ಲೆ ನೋಡಿದ್ದೆವಲ್ಲ. ನಿನಗೆ ನೆನಪಿದೆಯಾ? ಸ್ವಿಮ್ಮಿಂಗ್‌ ಪೂಲ್‌, ಕೈತೋಟ ಇತ್ತಲ್ಲ, ಅದೇ ಸುಂದರ ಬಂಗ್ಲೆ. ಬೆಳಗ್ಗೆ ಆ ಬ್ರೋಕರ್‌ ಸಿಕ್ಕಿದ್ದ. ಬಂಗ್ಲೆ ಮಾರಾಟಕ್ಕಿದೆಯಂತೆ. 4.5 ಲಕ್ಷ ಡಾಲರ್‌ ಬೆಲೆ ಹೇಳ್ತಿದಾನೆ. ತಗೊಳ್ಳೋಣವಾ?’
‘ಸರಿ. 4.2 ಲಕ್ಷ ಡಾಲರ್‌ಗೆ ಚೌಕಾಸಿ ಮಾಡು. ಬ್ಯಾಂಕ್‌ ಬ್ಯಾಲೆನ್ಸ್‌ ಎಷ್ಟಿದೆ ಅಂತ ನೋಡಿಕೋ..’
‘ ಅದನ್ನು ಕೊಳ್ಳುವಷ್ಟು ಬ್ಯಾಂಕ್‌ ಬ್ಯಾಲೇನ್ಸ್‌ ನಮ್ಮ ಹತ್ರ ಇದೆ ಡಾರ್ಲಿಂಗ್‌’
‘ಗ್ರೇಟ್‌!’
‘ಓಕೆ, ಸ್ವೀಟಿ, ಐ ಲವ್‌ ಯೂ.’
‘ಐ ಲವ್‌ ಯೂ, ಟೂ- ಬಾಯ್‌’
‘ಬಾ...ಯ್‌’.

ಸ್ವೀಟಿ ಜೊತೆ ಇಷ್ಟು ಮಾತಾಡಿ ಸೆಲ್‌ ಫೋನಿನ ಫ್ಲ್ಯಾಪ್‌ ಮುಚ್ಚಿಟ್ಟ ವನೇ, ಅದನ್ನು ಮೇಲಕ್ಕೆ ಹಿಡಿದು ಕೂಗತೊಡಗಿದ- ‘ಈ ಸೆಲ್‌ ಫೋನ್‌ ಯಾರದ್ದು?!’
:) ;)
ಭಾರತವು ಈಗ ಜರುಗುತ್ಹಿರುವ ಕಾಮೊನ್ ವೆಅಲ್ಥ್ ನಲ್ಲಿ ಮೊದಲನೆಯ ಸ್ಥಾನ ಪಡೆಯುತ್ಹದ?

Introduction

Hi, my friends........
I've started a new blog called entaneadbutha.blogspot.com. I hopw that u'll enjoy it
Thank u :)