ನಿನ್ನ ನೆನಪಾಯಿತು..
ಅಸಲಿಗೆ ನಾ ನಿನ್ನ ಎಂದು ಮರೆತಿದ್ದೆ?
ಪ್ರಶ್ನೆಗೆ ಮನನೊಂದಿತು..
ದೂರವಾದಷ್ಟು ಹತ್ತಿರ ನೀನು
ಹೀಗೇಕೆ ಕಾಡುತಿ?
ಹೋಗುವುದಾದರೆ ಹೋಗಿಬಿಡು ತಿರುಗಿಬರಬೇಡ ಮತ್ತೆ ನೆನಪಾಗಿ..
ಸಾಕೆನ್ನುವಷ್ಟು ನೋಯಿಸಿದ್ದಾಯ್ತು
ಕಣ್ಣೀರಲ್ಲಿ ತೋಯಿಸಿದ್ದಾಯ್ತು
ಇನ್ನೇಕೆ ಕಾಡುತಿ?
ಬೇಕೆಂದರೂ ಸಿಗಲಿಲ್ಲ ಮರೆವೆಂಬ ವರ
ಭಾವನೆಗಳಿಗೆ ಬರಲಿಲ್ಲ ಎಂದಿಗೂ ಬರ ..
ನಿನ್ನ ನೆನಪೇನು ಅಗ್ಗಿಷ್ಟಿಕೆಯೇ ಸುಡುತಿಹುದು ಈ ತರದಿ
ತಂಗಾಳಿಯಾಗಲಿಲ್ಲ ನೀನೆಂದೂ, ಕಳೆಯಲಿಲ್ಲ ಬೇಗುದಿ
ಹೋಗುವುದಾದರೆ ಹೋಗಿಬಿಡು
ತಿರುಗಿಬರಬೇಡ ಮತ್ತೆ ನೆನಪಾಗಿ..
ನಕ್ಷತ್ರಿಕನಂತೆ ಕಾಡಿಸಿದ್ದಾಯ್ತು
ಬಿಸಿನೀರಲ್ಲಿ ಬೇಯಿಸಿದ್ದಾಯ್ತು
ಇನ್ನೇಕೆ ಕಾಡುತಿ?
ಪ್ರೀತಿ ಮಿಶ್ರಿತ ಶೋಕ ಈ ವಿರಹ..
ಇದರಾಚೆಗಿನ ನೋವು ನೂರು ತರಹ..
ನಾಲ್ಕು ಕದದ ಹೃದಯದಲ್ಲಿ ಪ್ರೀತಿ ಬರುವುದು ಎಲ್ಲಿಂದ?
No comments:
Post a Comment